ಸುನಿತ ಪೀಟರ್ (ಉಪ ಪ್ರಾಂಶುಪಾಲರು, ಅಂಕುರ್)
ಒಂದು ವರ್ಷದಲ್ಲಿ ಕಲಿಕೆಯ ಅಂತರವನ್ನುನಿರ್ಮೂಲನೆ ಮಾಡುವುದು ಹೇಗೆ : ಅಂಕುರದ ಸೇತು ಕಾರ್ಯಕ್ರಮದ ಒಳನೋಟ
ಭಾರತದ ಮೂಲಭೂತ ಸಾಕ್ಷರತಾ ಅಂತರವು ಒಂದು ಅಂಚಿನ ಸಮಸ್ಯೆಯಲ್ಲ. ೨೦೨೪ರ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ೩ನೇ ತರಗತಿಯ ೭೬.೬% ಮಕ್ಕಳು ಮೂರು ವರ್ಷಗಳ ಶಾಲಾ ಶಿಕ್ಷಣದ ನಂತರವೂ ೨ನೇ ತರಗತಿ ಮಟ್ಟದ ಪಠ್ಯವನ್ನು ಓದಲಾಗುತ್ತಿಲ್ಲ ಎಂದು ಕಂಡುಬಂದಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಓದುವಿಕೆಯ ಮಟ್ಟಗಳು ಚೇತರಿಸಿಕೊಳ್ಳುತ್ತಿವೆಯಾದರೂ, ೫ನೇ ತರಗತಿಯ ಹೊತ್ತಿಗೂ ಕೇವಲ ೪೪.೮% ಮಕ್ಕಳು ಮಾತ್ರ ೨ನೇ ತರಗತಿ ಮಟ್ಟದಲ್ಲಿ ಓದಬಲ್ಲರು. ಇವು ರಾಷ್ಟ್ರೀಯ ಸರಾಸರಿಗಳು; ತಮ್ಮ ಕುಟುಂಬದಲ್ಲಿಯೇ ಮೊದಲ ಬಾರಿಗೆ ನಿರಂತರವಾಗಿ ಶಾಲೆಗೆ ಹೋಗುತ್ತಿರುವ ಮಕ್ಕಳ ಪಾಲಿಗೆ, ಆರಂಭಿಕ ಅಂತರ ಸಾಮಾನ್ಯವಾಗಿ ಇನ್ನೂ ಹೆಚ್ಚು ವಿಸ್ತೃತವಾಗಿದೆ.

ಅಂಕುರದ ಸೇತು ಕಾರ್ಯಕ್ರಮವು ಈ ಸಮಸ್ಯೆಯ ಒಂದು ಭಾಗಕ್ಕೆ ಕಾರ್ಯಸಾಧ್ಯ ಉತ್ತರವಾಗಿದ್ದು, ಇದನ್ನು ನೀತಿಯ ಮಟ್ಟದಲ್ಲಿ ಅಲ್ಲ, ಬದಲಿಗೆ ಪ್ರತಿಯೊಬ್ಬ ಮಗುವಿನ ಮಟ್ಟದಲ್ಲಿ ಪರೀಕ್ಷಿಸಲಾಗಿದೆ. ಈ ವರ್ಷದ ಗುಂಪು ಪ್ರಸ್ತುತ ಮಾದರಿಯ ಪ್ರಕಾರ ಸಾಗುತ್ತಿರುವ ಐದನೇ ತಂಡ. ಈ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಏನಾಗುತ್ತದೆ ಮತ್ತು ಅವರು ಮುಖ್ಯವಾಹಿನಿ ಶಿಕ್ಷಣಕ್ಕೆ ಪ್ರವೇಶಿಸಿದ ನಂತರ ಅಂಕಿಅಂಶಗಳು ಏನನ್ನು ತೋರಿಸುತ್ತವೆ ಎಂಬುದನ್ನು ಮುಂದೆ ವಿವರಿಸಲಾಗಿದೆ.
| ೧೩% → ೫೪.೬% ಪ್ರವೇಶದಿಂದ (೪ನೇ ತರಗತಿ ಮುಕ್ತಾಯ ) ಮೊದಲ ಘಟಕ ಪರೀಕ್ಷೆಯ ವರೆಗಿನ (೫ನೇ ತರಗತಿ) ವಿಷಯವಾರು ಸರಾಸರಿ | ೧೯ ಅಂಕಗಳು ೬ನೇ ತರಗತಿ ಪ್ರವೇಶದಲ್ಲಿ ಹಗಲು ವಿದ್ಯಾರ್ಥಿಗಳಿಗೆ ಹೋಲಿಸಿದರೆ ಶೈಕ್ಷಣಿಕ ಅಂತರ | ೬೦.೩% ಅದೇ ಗುಂಪಿನ ೬ನೇ ತರಗತಿಯ ಘಟಕ ಪರೀಕ್ಷೆ೧ ವರ್ಗ ಸರಾಸರಿ, ಸಿಬಿಎಸ್ಇ ಮುಖ್ಯವಾಹಿನಿಯಲ್ಲಿ | ೬ನೇ ಪ್ರಸ್ತುತ ಮಾದರಿಯ ಮೂಲಕ ಸಾಗಿದ ಸತತ ಗುಂಪು |
ರಚನಾತ್ಮಕ ಅನನುಕೂಲತೆ, ಕಲಿಕಾ ಕೊರತೆಯಲ್ಲ
ಮಕ್ಕಳು ೪ನೇ ತರಗತಿಯ ನಂತರ ಅಂಕುರ್ ಗೆ ಸೇರುತ್ತಾರೆ, ಆದರೆ ಪ್ರವೇಶದ ಸಮಯದಲ್ಲಿ ಅಳೆಯಲಾದ ಅವರ ವಾಸ್ತವಿಕ ಶೈಕ್ಷಣಿಕ ಮಟ್ಟ ಸಾಮಾನ್ಯವಾಗಿ ತರಗತಿಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಈ ವರ್ಷದ ಆರಂಭಿಕ ಮೌಲ್ಯಮಾಪನದಲ್ಲಿ ಗುಂಪಿನ ಎಲ್ಲಾ ವಿಷಯಗಳ ಸರಾಸರಿ ಅಂಕ ೧೩% ಆಗಿತ್ತು, ಮತ್ತು ಯಾವ ಮಗುವೂ ೩೫% ದಾಟಿರಲಿಲ್ಲ. ವಿಶೇಷವಾಗಿ ಇಂಗ್ಲಿಷ್ನಲ್ಲಿ, ಪ್ರವೇಶದ ಸಮಯದ ಸರಾಸರಿ ಪ್ರಾವೀಣ್ಯ ೯% ಆಗಿದ್ದು, ಪ್ರತಿಯೊಬ್ಬ ಹೊಸ ವಿದ್ಯಾರ್ಥಿಯೂ ತರಗತಿಯ ಮಟ್ಟಕ್ಕಿಂತ ಕೆಳಗಿದ್ದರು.
ಕಾರ್ಯಕ್ರಮದ ಸ್ವರೂಪ
ಮಕ್ಕಳು ಔಪಚಾರಿಕವಾಗಿ ೫ನೇ ತರಗತಿಯಲ್ಲಿ ಎನ್ಐಓಎಸ್ನ ಮುಕ್ತ ಮೂಲಭೂತ ಶಿಕ್ಷಣ (ಓಬಿಇ-ಬಿ) ಪಠ್ಯಕ್ರಮಕ್ಕೆ ಪ್ರವೇಶಿಸುವ ಮೊದಲು,ಏಪ್ರಿಲ್ ಮಧ್ಯಭಾಗದಿಂದ ಜೂನ್ವರೆಗೆ ೯–೧೦ ವಾರಗಳ ತೀವ್ರ ಘಟ್ಟವಾಗಿ ಸೇತು ಕಾರ್ಯಕ್ರಮವು ನಡೆಯುತ್ತದೆ.ಇದು ಮೂಲಭೂತ ಸಾಕ್ಷರತೆ, ಗಣಿತ ಕೌಶಲ ಮತ್ತು ಆಡು ಆಂಗ್ಲ ಭಾಷೆಯ ಮೇಲೆ ಕೇಂದ್ರೀಕರಿಸುತ್ತದೆ, ಇದನ್ನು ದೈನಂದಿನ ದ್ವಿಭಾಷಾ ರಚನೆಯ ಮೂಲಕ ನೀಡಲಾಗುತ್ತದೆ. ಆ ರಚನೆಯಲ್ಲಿ ಬೆಳಗಿನ ಯೋಗದಿಂದ ಆರಂಭವಾಗಿ ಸಂಜೆಯ ಮನೆಪಾಠ ಮತ್ತು ವೃತ್ತ ಸಮಯದವರೆಗೆ ಸಾಗುವ ದೈನಂದಿನ ವೇಳಾಪಟ್ಟಿಯನ್ನು ಒಳಗೊಂಡಿದೆ.

ಎನ್ಐಓಎಸ್ ಶೈಕ್ಷಣಿಕ ವರ್ಷ ಆರಂಭವಾದ ನಂತರ, ಇದು ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ, ಹಿಂದಿ, ಗಣಕ ವಿಜ್ಞಾನ, ಸಾಮಾನ್ಯ ಜ್ಞಾನ ಮತ್ತು ಶಬ್ದಸಂಪತ್ತು ಮುಂತಾದ ವಿಷಯಗಳನ್ನು ಒಳಗೊಂಡಿದೆ. ಶಬ್ದಸಂಪತ್ತನ್ನು ಇಂಗ್ಲಿಷ್ನೊಳಗೆ ಸೇರಿಸದೆ, ಸ್ವಂತ ಸಚೇತನ ಶಬ್ದಸಂಪತ್ತು ಕಲಿಕಾ ವಿಧಾನದ ಮೂಲಕ ಪ್ರತ್ಯೇಕವಾಗಿ ಅನುಸರಿಸಲಾದ ವಿಷಯವಾಗಿ ಕಲಿಸಲಾಗುತ್ತದೆ; ಹೊಸ ಪದಗಳು, ಕಠಿಣ ಪದಗಳು ಮತ್ತು ಮುಖ್ಯ ಪದಗಳನ್ನು ಪುನರಾವರ್ತನೆಯ ಮೂಲಕ ಅಭ್ಯಾಸ ಮಾಡಿಸಲಾಗುತ್ತದೆ. ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ: ಪಾಠವಾರು ಪರೀಕ್ಷೆಗಳು, ವರ್ಷದಲ್ಲಿ ಮೂರು ಘಟಕ ಪರೀಕ್ಷೆಗಳು, ಒಂದು ಪೂರ್ವಾಭ್ಯಾಸ ಪರೀಕ್ಷೆ ಮತ್ತು ಎನ್ಐಓಎಸ್ ವಾರ್ಷಿಕ ಪರೀಕ್ಷೆ; ಹೀಗೆ ಪ್ರತಿ ಚಕ್ರದ ನಂತರ ಫಲಿತಾಂಶಗಳನ್ನು ಸಂಗ್ರಹಿಸಿ ಪರಾಮರ್ಶಿಸಲಾಗುತ್ತದೆ, ಇದರಿಂದ ಮುಂದಿನ ಚಕ್ರ ಆರಂಭವಾಗುವ ಮೊದಲೇ ಪರಿಹಾರ ತರಗತಿಗಳನ್ನು ಯೋಜಿಸಲಾಗುತ್ತದೆ.
ಮೊದಲ ವರ್ಷದೊಳಗೆ ಆಗುವ ಬದಲಾವಣೆಗಳು
ಈ ವರ್ಷ(2026-27) ಎನ್ಐಓಎಸ್ ೫ನೇ ತರಗತಿಯ ಈ ಗುಂಪಿನ ಮೊದಲ ಘಟಕ ಪರೀಕ್ಷೆಯ ಹೊತ್ತಿಗೆ, ಗುಂಪಿನ ವಿಷಯವಾರು ಸರಾಸರಿ ೧೩% ಆರಂಭಿಕ ಮಟ್ಟದಿಂದ ೫೪.೬%ಗೆ ಏರಿತ್ತು, ಪ್ರತ್ಯೇಕ ವಿಷಯಗಳ ಸರಾಸರಿ ೪೧% (ಪರಿಸರ ಅಧ್ಯಯನ, ವಿಜ್ಞಾನ) ದಿಂದ ೭೨.೪% (ಕನ್ನಡ) ವರೆಗೆ ಇತ್ತು. ಗುಂಪಿನೊಳಗಿನ ವ್ಯಾಪ್ತಿ ವಿಶಾಲವಾಗಿದೆ: ಈ ಅವಧಿಯ ಅಗ್ರ ಸಾಧಕ ೯೦%ಗಿಂತ ಹೆಚ್ಚು ಅಂಕ ಗಳಿಸಿದ್ದರೆ, ಕೆಲವು ವಿದ್ಯಾರ್ಥಿಗಳು ೨೦–೪೦% ವ್ಯಾಪ್ತಿಯಲ್ಲಿಯೇ ಉಳಿದಿದ್ದಾರೆ. ಆ ವ್ಯಾಪ್ತಿ ನಿರೀಕ್ಷಿತವೇ: ಮಕ್ಕಳು ಬಹಳ ಭಿನ್ನವಾದ ಆರಂಭಿಕ ಹಂತಗಳಿಂದ ಪ್ರವೇಶಿಸುತ್ತಾರೆ, ಮತ್ತು ಕೆಲವರಿಗೆ ಹೆಚ್ಚುವರಿ ಕಲಿಕಾ ತೊಂದರೆಗಳಿದ್ದು, ಅವರಿಗೆ ೧–೨ ವರ್ಷಗಳ ವಿಸ್ತೃತ ಸೇತು ಅವಧಿಯ ದೀರ್ಘ ಪರಿಹಾರ ಅವಧಿಗಳು ಬೇಕಾಗುತ್ತವೆ.

ಎನ್ಐಓಎಸ್ ೫ನೇ ತರಗತಿಯ ನಂತರ ಏನಾಗುತ್ತದೆ
ಎನ್ಐಓಎಸ್ ೫ನೇ ತರಗತಿಯ ವರ್ಷವನ್ನು ಪೂರ್ಣಗೊಳಿಸಿದ ಮಕ್ಕಳನ್ನು ೬ನೇ ತರಗತಿಯಿಂದ ದ ಸಂಹಿತಾ ಅಕಾಡೆಮಿಯ ಸಿಬಿಎಸ್ಇ ಮುಖ್ಯವಾಹಿನಿ ಶಾಲೆಗೆ ಸೇರಿಸಲಾಗುತ್ತದೆ, ಅಲ್ಲಿ ಅವರು ಮೊದಲ ಬಾರಿಗೆ ಪ್ರಶಸ್ತ ದಿನ-ವಿದ್ಯಾರ್ಥಿಗಳೊಂದಿಗೆ ತರಗತಿ ಕೊಠಡಿ ಹಂಚಿಕೊಳ್ಳುತ್ತಾರೆ. ೬ನೇ ತರಗತಿ ಪ್ರವೇಶದ ಸಮಯದಲ್ಲಿ, ದಿನ-ವಿದ್ಯಾರ್ಥಿ ಸಹಪಾಠಿಗಳಿಗಿಂತ ಸರಾಸರಿ ಶೈಕ್ಷಣಿಕ ಅಂತರ ಸುಮಾರು ೧೯ ಅಂಕಗಳಷ್ಟಿರುತ್ತದೆ. ಈ ವರ್ಷದ ೬ನೇ ತರಗತಿಯ ಘಟಕ ಪರೀಕ್ಷೆ- ೧ರ ಹೊತ್ತಿಗೆ, ಅದೇ ಗುಂಪಿನ ಕಲಿಕೆ ೬೦.೩% ಸರಾಸರಿ ದಾಖಲಿಸಿದೆ.
ಅಲ್ಲಿಂದ ಮುಂದೆ, ಅದೇ ವಿದ್ಯಾರ್ಥಿಗಳು ೧೦ ಮತ್ತು ೧೨ನೇ ತರಗತಿಯ ಸಿಬಿಎಸ್ಇ ವಾರ್ಷಿಕ ಪರೀಕ್ಷೆಗಳನ್ನು ಬರೆಯುತ್ತಾರೆ. ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು ಪ್ರಥಮ/ದ್ವಿತೀಯ ಸ್ತರದ ಕಾಲೇಜುಗಳಲ್ಲಿ ಸೀಟುಗಳನ್ನು ಗಳಿಸಿ, ತಮ್ಮ ಕುಟುಂಬಗಳನ್ನು ಪೋಷಿಸಬಲ್ಲ ಸ್ಥಿರ ಉದ್ಯೋಗಗಳಿಗೆ ಸೇರಿದ್ದಾರೆ.
ಒಂದು ಮಧ್ಯಸ್ಥಿಕೆಯಲ್ಲ: ಇದೊಂದು ಪ್ರಕ್ರಿಯೆಯಾಗಿ ಏಕೆ ಮುಖ್ಯ,
ಇದೆಲ್ಲವೂ ಕೇವಲ ಸೇತು ಕಾರ್ಯಕ್ರಮದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಇದು ನಿರಂತರ ಆರಂಭಿಕ ಪರೀಕ್ಷೆ, ದೈನಂದಿನವಾಗಿ ಅನುಸರಿಸಲಾದ ಪಠ್ಯಕ್ರಮ, ನೇರವಾಗಿ ಪರಿಹಾರ ಬೋಧನೆಗೆ ಒತ್ತು ನೀಡುವ ಮೌಲ್ಯಮಾಪನ ಚಕ್ರ, ಮತ್ತು ವರ್ಷಗಳಿಂದ ಪರಿಷ್ಕರಿಸಲಾದ ಮುಖ್ಯವಾಹಿನಿ ಶಿಕ್ಷಣಕ್ಕೆ ಪರಿವರ್ತನೆಯ ಉದ್ದೇಶಪೂರ್ವಕ ಯೋಜನೆಯ ಮೇಲೆ ಅವಲಂಬಿತವಾಗಿದೆ. ೬ನೇ ತರಗತಿಯ ಹೊತ್ತಿಗೆ ಅಂಕುರ್ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದರೆ, ಆ ಅಂತರವನ್ನು ವೈಯಕ್ತಿಕ ಪರಿಹಾರ ಅವಧಿಗಳ ರಚನೆಯ ಮೂಲಕ ಪೂರ್ವನಿಯೋಜಿತವಾಗಿ ವೇಳಾಪಟ್ಟಿ ಅನುಸರಿಸಿ ಪರಿಹರಿಸಲಾಗುತ್ತದೆ, ಇದನ್ನು ಮುಖ್ಯವಾಹಿನಿ ಶಿಕ್ಷಣದ ಭಾಗವಾಗಿ ಮುಂದುವರಿಸಿ ಪರಿವರ್ತನೆಯ ಹಂತದಲ್ಲಿ ಪರಿಹರಿಸಲಾಗುತ್ತದೆ.
ಈ ಕಾರ್ಯಕ್ರಮ, ಅದರ ಮೂಲತತ್ವದಲ್ಲಿ, ಒಂದು ಕಾರ್ಯಾಚರಣಾ ಪ್ರಕ್ರಿಯೆ: ಅಂತರ ಪತ್ತೆ ಮಾಡಿ , ಕಲಿಸಿ , ಪರೀಕ್ಷಿಸಿ , ಕಲಿಕೆಯ ಮಟ್ಟವನ್ನು ಸಂಗ್ರಹಿಸಿ , ಅಂತರವನ್ನು ಪರಿಹರಿಸಿ, ಪರಿವರ್ತಿಸುವುದು ; ಇದು ದೀರ್ಘಕಾಲದಲ್ಲಿ ಮತ್ತು ಸಾಕಷ್ಟು ಸ್ಥಿರವಾಗಿ ಮುಂದುವರಿಯುತ್ತದೆ, ಇದರಿಂದ ಮಕ್ಕಳು ಪ್ರವೇಶಿಸುವಾಗ ಇದ್ದ ಅಂತರ, ಅವರು ಮುಂದೆ ಹೊರಡುವಾಗ ಅಂತರವಾಗಿ ಉಳಿಯುವುದಿಲ್ಲ. ಈ ಪ್ರಕ್ರಿಯೆಯೇ, ಒಂದು ತರಗತಿಯ ಪರಿವರ್ತನಾ ತಂತ್ರಕ್ಕಿಂತ ಹೆಚ್ಚಾಗಿ, ವಿಸ್ತರಿಸಲು ಯೋಗ್ಯವಾದ ಭಾಗ.